ಮಾಯಿಗೌಡನಹಳ್ಳಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ 2023
ಮಾಯಿಗೌಡನಹಳ್ಳಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ದಿನಾಂಕ 23-01-2023 ಹಾಗೂ 24-01-2023 ರಂದು ಸರ್ಕಾರಿ ಪ್ರೌಢಶಾಲೆ ಅಂಕನಹಳ್ಳಿ ಇಲ್ಲಿ ವಿಜೃಂಭಣೆಯಿಂದ ಜರುಗಿತು.
ಕಾರ್ಯ ಕ್ರಮವು ಅಂಕನಹಳ್ಳಿ ಕೊಪ್ಪಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಿಂದ ಕುಂಭಮೇಳ ಸಮೇತ ಮೆರವಣಿಗೆ ಹೊರಟು ಅಂಕನಹಳ್ಳಿ ಗ್ರಾಮದ ಮೂಲಕ ಸುಮಾರು ಒಂದು ಕಿ.ಮೀ.ದೂರದ ಪ್ರೌಢಶಾಲೆಯನ್ನು ತಲುಪಿತು.
ಶಾಲೆಗೆ ಆಗಮಿಸಿದ ಅತಿಥಿ ಶಾಲಾ ಮಕ್ಕಳು, ಶಿಕ್ಷಕರು ಹಾಗೂ ಗ್ರಾಮಸ್ಥರನ್ನು ಪ್ರೌಢಶಾಲೆಯ ಮುಖ್ಯಶಿಕ್ಷಕರು,ಶಿಕ್ಷಕರು , ವಿದ್ಯಾರ್ಥಿಗಳ ತಂಡ ಕರತಾಡನದ ಮೂಲಕ ಆತ್ಮೀಯವಾಗಿ ಸ್ವಾಗತಿಸಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಶ್ರೀಯುತ .ಎಸ್.ಸೋಮಶೇಖರ್ ರವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಕ್ಷೇತ್ರ ಸಮನ್ವಯಾಧಿಕಾರಿಗಳು ಹಾಗೂ ತಾಲ್ಲೂಕು ಅಕ್ಷರ ದಾಸೋಹ ಸಹ ನಿರ್ದೇಶಕರು ಚಟುವಟಿಕೆಗಳಲ್ಲಿ ಮಕ್ಕಳೊಂದಿಗೆ ಪಾಲ್ಗೊಂಡು ಸ್ಫೂರ್ತಿ ನೀಡಿದರು.
ಕಾರ್ಯಕ್ರಮದಲ್ಲಿ ತೋಚಿದ್ದು ಗೀಚು, ಏನಂತೀರಿ....? ಹಾಗೂ ಕಲಿಕಾ ದಿಬ್ಬ ವಿಭಾಗಗಳು ಎಲ್ಲರ ಗಮನ ಸೆಳೆದು ಪ್ರಶಂಸೆಗೆ ಪಾತ್ರವಾದವು.

























.jpeg)
.jpeg)





















.jpeg)


